HEALTH TIPS

29ರಂದು ಕನ್ನಡ ಉದ್ಯೋಗಾರ್ಥಿಗಳಿಂದ ಪಿಎಸ್‍ಸಿ ಕಚೇರಿ ಎದುರು ಧರಣಿ

    ಕುಂಬಳೆ: ಕೇರಳ ಲೋಕಸೇವಾ ಆಯೋಗ (ಪಿಎಸ್‍ಸಿ) ಅ.22ರಂದು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕನ್ನಡ ಉದ್ಯೋಗಾರ್ಥಿಗಳ ಆಯ್ಕೆಗಾಗಿ ನಡೆಸಿ ಕನ್ನಡ ಮತ್ತು ಮಲಯಾಳ ಬಲ್ಲ  ಎಲ್‍ಡಿ ಕ್ಲರ್ಕ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಪ್ರಶ್ನೆಯನ್ನೇ ಹೆಚ್ಚಾಗಿ ನೀಡಿದ್ದು, ಇದರಿಂದ ಕನ್ನಡ ಉದ್ಯೋಗಾರ್ಥಿಗಳು ವಂಚಿತರಾಗುವುದರಿಂದ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕನ್ನಡ ಮತ್ತು ಮಲೆಯಾಳ ಬಲ್ಲ  ಎಲ್‍ಡಿ ಕ್ಲರ್ಕ್ ಪರೀಕ್ಷೆ ಬರೆದ ಉದ್ಯೋಗಾರ್ಥಿಗಳು ಅ.29ರಂದು ಕಾಸರಗೋಡು ಪಿಎಸ್‍ಸಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
     ಈ ಬಗ್ಗೆ ಶುಕ್ರವಾರ ಬ್ಯಾಂಕ್ ರಸ್ತೆಯ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ ಕನ್ನಡ ಹೋರಾಟ ಸಮಿತಿ ಮತ್ತು ಉದ್ಯೋಗಾರ್ಥಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
     ಪಿಎಸ್‍ಸಿ ವಿಜ್ಞಾಪನೆ ಪ್ರಕಾರ ಪರೀಕ್ಷೆ ನಡೆಸದೇ ಕನ್ನಡ ಉದ್ಯೋಗಾರ್ಥಿಗಳಿಗೆ ಉಂಟಾದ ಅನ್ಯಾಯದ ಬಗ್ಗೆ ಈಗಾಗಲೇ ಅಧಿಕೃತರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಪಿಎಸ್‍ಸಿ ಅಧ್ಯಕ್ಷರನ್ನು ತಿರುವನಂತಪುರದಲ್ಲಿ ಭೇಟಿಯಾಗಿ ಅನ್ಯಾಯದ ಬಗ್ಗೆ ಮನವರಿಕೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
       ಸಭೆಯಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಎಂ.ಬಳ್ಳಕ್ಕುರಾಯ ಅಧ್ಯಕ್ಷತೆವಹಿಸಿ, ಭಾಷಾ ಅಲ್ಪಸಂಖ್ಯಾತರ ನಾನಾ ಬೇಡಿಕೆಗಳಿಗೆ ಸರಕಾರ ಗಮನ ಹರಿಸುವುದಿಲ್ಲ, ಅದನ್ನು ಪಡೆಯುವುದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಪಿಎಸ್‍ಸಿ ಪರೀಕ್ಷೆಯಲ್ಲಿ ಕನ್ನಡ ಉದ್ಯೋಗಾರ್ಥಿಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿರುವುದು. ಇದನ್ನು ಯಾವ ಕಾರಣಕ್ಕೂ ಅಂಗೀಕರಿಸುವಂತಿಲ್ಲ ಎಂದರು.
     ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ  ಮಾತನಾಡಿ, ಪಿಎಸ್‍ಸಿಯು ನಿರಂತರ ಬೇಡಿಕೆಯ ಫಲವಾಗಿ ಕನ್ನಡ ಮತ್ತು ಮಲಯಾಳ ಬಲ್ಲ ಎಲ್‍ಡಿ ಕ್ಲರ್ಕ್ ಪರೀಕ್ಷೆ ನಡೆಸಿದ್ದಾರೆ. ಇದೀಗ ಪರೀಕ್ಷೆ ನಡೆಸಿದರೂ ಅದರಿಂದ ಕನ್ನಡ ಉದ್ಯೋಗಾರ್ಥಿಗಳಿಗೆ ಅನ್ಯಾಯವಾಗಿದೆ. ಅದ್ದರಿಂದ ಕೂಡಲೇ ಪರೀಕ್ಷೆಯನ್ನು ರದ್ದುಪಡಿಸುವ ಸಲುವಾಗಿ  ಪಿಎಸ್‍ಸಿಗೆ ಮನವಿ ಮಾಡಲಾಗಿದೆ ಎಂದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ವಿಷಯವನ್ನು ಮಂಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಅಧ್ಯಕ್ಷ ಎಸ್‍ವಿ ಭಟ್ ಮಾತನಾಡಿದರು. ಆರಂಭದಲ್ಲಿ ಸುಂದರ ಬಾರಡ್ಕ ಸ್ವಾಗತಿಸಿ, ವಿಷ್ಣು ಪ್ರಕಾಶ್ ಮುಳ್ಳೇರಿಯಾ ವಂದಿಸಿದರು. ನೂರಾರು ಕನ್ನಡ ಉದ್ಯೋಗಾರ್ಥಿಗಳು ಸಭೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries