ಉಪ್ಪಳ: ತೆಂಕುತಿಟ್ಟು ಯಕ್ಷಗಾನದ ಕಲಾವಿದ, ಅರ್ಥಧಾರಿ ಆಗಿದ್ದುದಲ್ಲದೇ ತೆಂಕಣ ವೇಷಭೂಷಣ ಮತ್ತು ಪ್ರಸಾದನ ತಜ್ಞರಾಗಿ ತೆಂಕುತಿಟ್ಟಿನ ಆಹಾರ್ಯಕ್ಕೆ ಪರಂಪರೆಯ ಸೊಬಗು ಮತ್ತು ಖಚಿತತೆಯನ್ನು ತಂದಿತ್ತು, ಮಹಾನ್ ಕೊಡುಗೆ ನೀಡಿ ಪ್ರಸಿದ್ಧರಾದ ದಿ. ದೇವಕಾನ ಕೃಷ್ಣ ಭಟ್ಟರ ಸಂಸ್ಮರಣಾ ಗ್ರಂಥವನ್ನು ಅರ್ಥಪೂರ್ಣವಾಗಿ ರಚಿಸಲು ತೀರ್ಮಾನಿಸಲಾಗಿದೆ. ಹಿರಿಯ ಕಲಾಚಿಂತಕ ಡಾ. ಎಂ. ಪ್ರಭಾಕರ ಜೋಷಿ ಅವರ ಮಾರ್ಗದರ್ಶನದಲ್ಲಿ ಪೈವಳಿಕೆಯ ದೇವಕಾನ ಕ್ಲಿನಿಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾಲೋಚನಾ ಸಭೆಯಲ್ಲಿ ಸಂಸ್ಮರಣಾ ಗ್ರಂಥ ರಚನೆಗೆ ಸಮಿತಿ ರೂಪಿಸಲಾಯಿತು. ದಿ. ದೇವಕಾನ ಕೃಷ್ಣ ಭಟ್ಟರ ಪ್ರಥಮ ವರ್ಷಾಂತಿಕದ ಸಂದರ್ಭ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.
ಸಮಾಲೋಚನಾ ಸಭೆಯಲ್ಲಿ ಹಿರಿಯ ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್ ಗ್ರಂಥರಚನೆಯ ಕುರಿತು ಪ್ರಸ್ತಾವಿಕ ಮಾತನಾಡಿ, ರೂಪುರೇಷೆ, ಮಾರ್ಗದರ್ಶನಗಳನ್ನಿತ್ತರು. ಅಧ್ಯಾಪಕ, ವೇಷಧಾರಿ, ಅರ್ಥಧಾರಿ, ವೇಷಭೂಷಣ ತಜ್ಞ, ಕೃಷಿಕ ಹೀಗೆ ಬಹುಮುಖೀ ನೆಲೆಯಿಂದ ದೇವಕಾನ ಕೃಷ್ಣಭಟ್ಟರ ಬದುಕಿನ ಕೊಡುಗೆಯನ್ನು ದಾಖಲಿಸುತ್ತಾ, ತೆಂಕುತಿಟ್ಟು ಯಕ್ಷಗಾನಕ್ಕೆ ಇದೊಂದು ಮಾದರಿ ಗ್ರಂಥವಾಗಿ ರೂಪುಗೊಳ್ಳಬೇಕೆಂದು ಅವರು ಆಶಿಸಿದರು. ಪ್ರಸ್ತುತ ಗ್ರಂಥಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ದೇವಕಾನ ಕೃಷ್ಣ ಭಟ್ಟರ ಅಪರೂಪದ ಹಳೆಯ ಸಂದರ್ಭದ ಸಂಗ್ರಹ ಚಿತ್ರಗಳಿದ್ದಲ್ಲಿ ಅವರ ಮೇಲಿನ ಅಭಿಮಾನದಿಂದ ಕಲಾಪ್ರೇಮಿಗಳು ದೇವಕಾನ ಬಳಗಕ್ಕೆ ಒದಗಿಸಿಕೊಡಬೇಕೆಂದು ಸಭೆಯಲ್ಲಿ ವಿನಂತಿಸಲಾಯಿತು.
ಸಭೆಯಲ್ಲಿ ಕುರಿಯ ಗೋಪಾಲಕೃಷ್ಣ ಭಟ್, ಸೇರಾಜೆ ಸೀತಾರಾಮ ಭಟ್, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಸೇರಾಜೆ ಶ್ರೀನಿವಾಸ ಭಟ್, ಸತೀಶ ಅಡಪ ಸಂಕಬೈಲು, ರಾಧಾಕೃಷ್ಣ ಮಾಸ್ತರ್ ಪೈವಳಿಕೆ, ಡಾ. ರಾಜಾರಾಮ ದೇವಕಾನ, ಗೋಪಾಲಕೃಷ್ಣ ಭಟ್ ಕಾನ, ಪೆಲತ್ತಡ್ಕ ಗಣಪತಿ ಭಟ್, ರಾಂಪ್ರಸಾದ್ ಅಮ್ಮಂಗಲ್ಲು ಸಹಿತ ಪ್ರಮುಖರು ಉಪಸ್ಥಿತರಿದ್ದು ಸಲಹೆ, ಸೂಚನೆಗಳನ್ನಿತ್ತರು. ದೇವಕಾನ ಶ್ರೀಕೃಷ್ಣ ಭಟ್ ಸ್ವಾಗತಿಸಿ, ಕಿರಣ ಮಾಸ್ತರ್ ಕುದ್ರೆಕೋಡ್ಲು ವಂದಿಸಿದರು.