ಪೆರ್ಲ: ಜ್ಞಾನದ ಕೊರತೆಯಿಂದ ಮನುಷ್ಯರು ಸಂಬಂಧಗಳನ್ನು ಬೆಳೆಸುವಲ್ಲಿ ಮುಗ್ಗರಿಸುತ್ತಾರೆ. ಪರಸ್ಪರ ಸಂಪರ್ಕ-ಸಂವೇದನೆಗಳಿಗೆ ಭಾಷೆ ಮುಖ್ಯ. ವಿವಿಧ ಭಾಷೆಗಳನ್ನು ಕಲಿಯುವುದರಿಂದ ಭಾಷೆಗಳ ನಡುವಿನ ಸಂವೇದನ ಅರ್ಥವಾಗುತ್ತದೆ ಮಾತೃಭಾಷೆ ಕಲಿತು ಭಾಷೆಯ ಮೇಲೆ ಹಿಡಿತ ಸಾಧಿಸಿದರೆ ಇತರ ಭಾಷೆಗಳನ್ನು ಕಲಿಯಲು ಸುಲಭವಾಗುತ್ತದೆ. ಭಾಷೆಗಳ ನಡುವೆ ತಾರತಮ್ಯ ಸಲ್ಲದು. ವಿವಿಧ ಭಾಷೆಗಳನ್ನು ಕಲಿಯುವಿದರ ಮೂಲಕ ಭಾಷಾ ವ್ಯವಹಾರಕ್ಕೆ ಕಾರಣವಾಗುತ್ತದೆ ಎಂದು ಪೆರ್ಲ ಶಾಲಾ ಶಿಕ್ಷಕ ಎ.ಕೆ ಮಾಧವನ್ ನಂಬೂದಿರಿ ಕೈದಾಪ್ರಂ ನುಡಿದರು.
ಅವರು ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ವತಿಯಿಂದ ಸ್ವರ್ಗದಲ್ಲಿ ನಡೆದ ಮಲಯಾಳಂ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಉಪಾಧ್ಯಕ್ಷೆ, ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ವಹಿಸಿದ್ದರು.ಸಭೆಯಲ್ಲಿ ಶ್ರೀನಿವಾಸ ಪೆರಿಕ್ಕಾನ, ದೀಪಾ ಪ್ರಕಾಶ್ ಸ್ವರ್ಗ, ಈಶ್ವರ ಪ್ರಸಾದ್ ಪಂಬೆತ್ತಡ್ಕ ಉಪಸ್ಥಿತರಿದ್ದರು. ತೃಪ್ತಿ ಬೈರಡ್ಕ ಪ್ರಾರ್ಥಿಸಿದರು. ಗ್ರಂಥಾಲಯದ ಕಾರ್ಯದರ್ಶಿ ರಾಮಚಂದ್ರ ಎಂ ಸ್ವಾಗತಿಸಿ, ಸಮಿತಿ ಸದಸ್ಯ ರವಿ ವಾಣಿನಗರ ವಂದಿಸಿದರು.


