ಬದಿಯಡ್ಕ: ದೀಪಾವಳಿ ಉತ್ಸವದ ಹಿನ್ನೆಲೆಯಲ್ಲಿ ತೈಲಾಭ್ಯಂಜನದ ಅಂಗವಾಗಿ ಶ್ರೀಮದ್ ಎಡನೀರು ಮಠದಲ್ಲಿ ಭಾನುವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ನೇತೃತ್ವದಲ್ಲಿ ಆಚರಣೆ ನಡೆಯಿತು.
ಭಾನುವಾರ ಮುಂಜಾನೆಯೇ ವಿಚವಿಧಡೆಗಳಿಂದ ಆಗಮಿಸಿದ ಶ್ರದ್ದಾಳುಗಳಿಗೆ ಶ್ರೀಗಳು ಮಂಗಲ ತೈಲ ವಿತರಿಸುವ ಮೂಲಕ ಅಭ್ಯಂಜನ ಸ್ನಾನಕ್ಕೆ ಹರಿಸಿದರು. ಬೆಂಗಳೂರು, ಮಂಗಳೂರು, ಪುತ್ತೂರು, ಸುಳ್ಯ, ಕಾಸರಗೋಡು ಸಹಿತ ವಿವಿಧ ಪ್ರದೇಶಗಳ ಭಕ್ತರು ಭಾಗವಹಿಸಿದ್ದರು. ಅಪರಾಹ್ನ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.



