ಬದಿಯಡ್ಕ : ಕುಂಬ್ಡಾಜೆ ಪೊಡಿಪಳ್ಳ ಶ್ರೀ ಭಗವತಿ ಕ್ಷೇತ್ರದಲ್ಲಿ ತುಲಾ ಪುತ್ತರಿ (ತುಲಾ 10)ಮಹೋತ್ಸವವು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಭಕ್ತಿ ಭಾವದೊಂದಿಗೆ ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಭಾಂಡಾರವನ್ನು ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಕಲಶಾಟ್, ಕೊಡಿ ಎಲೆ ಇಡುವುದು ಮೊದಲಾದ ಕಾರ್ಯಕ್ರಮಗಳ ನಂತರ ನಡೆದ ಪ್ರಸಾದ ಭೋಜನವನ್ನು ಭಕ್ತಾದಿಗಳು ಸ್ವೀಕರಿಸಿದರು. ಅಪರಾಹ್ನ ಸಮಸ್ತ ಜನತೆಯ ಏಳಿಗೆಗಾಗಿ ಪ್ರದಕ್ಷಿಣೆ ಬಂದು ಪ್ರಾರ್ಥಿಸಲಾಯಿತು. ಪ್ರಸಾದ ವಿತರಣೆಯ ಬಳಿಕ ಭಂಡಾರ ಹಿಂತಿರುಗಿಸಲಾಯಿತು. ಭಂಡಾರ ಮನೆಯಲ್ಲಿ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯಿತು.
ಪೊಡಿಪ್ಪಳ್ಳ ಕ್ಷೇತ್ರದಲ್ಲಿ ತುಲಾಪುತ್ತರಿ ಮಹೋತ್ಸವ ಸಂಪನ್ನ
0
ಅಕ್ಟೋಬರ್ 28, 2019