HEALTH TIPS

ಜಿಲ್ಲಾ ಆಸ್ಪತ್ರೆಯಲ್ಲಿ ದ್ರವ ತ್ಯಾಜ್ಯ ಪರಿಷ್ಕರಣೆ ಘಟಕ ನಿರ್ಮಾಣ ಚಟುವಟಿಕೆ ಆರಂಭ

   
    ಕಾಸರಗೋಡು:  ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವ ದ್ರವ ತ್ಯಾಜ್ಯ ಪರಿಷ್ಕರಣೆ ಘಟಕದ (ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್)ನಿರ್ಮಾಣ ಚಟುವಟಿಕೆ ಆರಂಭಿಸಲಾಗಿದೆ. 1.25 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಿಸಲಾಗುವುದು.
       ಜಿಲ್ಲಾ ಆಸ್ಪತ್ರೆಯ 450 ದಾಖಲಾತಿ ರೋಗಿಗಳು, ಹೊರರೋಗಿಗಳು, ಸಿಬ್ಬಂದಿ, ಸಾರ್ವಜನಿಕರು ಬಳಸುವ ಶೌಚಾಲಯ, ಕ್ಯಾಂಟೀನ್ ಇತ್ಯಾದಿಗಳ ನೀರು ಸಹಿತ 2 ಲಕ್ಷ ಲೀಟರ್ ಮಲಿನ ಜಲ ಶುದ್ಧೀಕರಿಸುವ ಘಟಕವನ್ನು ನಿರ್ಮಿಸಲಾಗುತ್ತಿದೆ. ಮಲಿನಜಲದ ಇನ್ ಕ್ವಿಲೇಷನ್ ಟಾಂಕಿ, ಕೆಮಿಕಲ್ ಟಾಂಕಿ, ಕ್ಲೋರಿನ್ ಮಿಶ್ರಣ ಟಾಂಕಿ ಇತ್ಯಾದಿ ಬೇರೆ ಬೇರೆ ಹಂಂತಹಗಳ ಶುದ್ಧೀಕರಣ ಪ್ರಕ್ರಿಯೆ ಮೂಳಕ ಮಲಿನಜಲವನ್ನು ಹರಿಸಿ ಶುದ್ಧಜಲವಾಗಿಸುವ ಚಟುವಟಿಕೆ ಇಲ್ಲಿ ನಡೆಸಲಾಗುತ್ತದೆ. 6 ತಿಂಗಳ ಅವಧಿಯಲ್ಲಿ ಪ್ಲಾಂಟ್ ನಿರ್ಮಾಣ ಪೂರ್ಣಗೊಂಡು ಚಟುವಟಿಕೆ ಆರಂಭಗೊಳ್ಳಲಿದೆ. ಈ ಮೂಲಕ ಜಿಲ್ಲಾ ಆಸ್ಪತ್ರೆಯ ತ್ಯಾಜ್ಯ ನಿವಾರಣೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
     ಇದೇ ರೀತಿಯ ಪ್ಲಾಂಟನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲೂ ಸ್ಥಾಪಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಮಂಜೂರಾತಿ ನೀಡಲಾಗಿದೆ. ರಾಜ್ಯ ಸರಕಾರದ ಮಲಿನಜಲ ನಿಯಂತ್ರಣ ಮಂಡಳಿ ಮಂಜೂರಾತಿ ಪಡೆದಿರುವ ಕೊಚ್ಚಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪೆಂಟಗನ್ ಇಂಜಿನಿಯರಿಂಗ್ ಎಂಬ ಸಂಸ್ಥೆ ಈ ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಾಣ ನಡೆಸುತ್ತಿದೆ.
     ಈ ಸಂಬಂಧ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕಾರ್ಯಕಾರಿ ಇಂಜಿನಿಯರ್ ಮಣೀಕಂಠ ಕುಮಾರ್, ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಕೆ.ವಿ., ಆರ್.ಎಂ.ಒ. ಡಾ.ರಂಜಿತ್ ಕ್ಢ?ಣಣ್, ಪೆಂಟಗನ್ ಸಂಸ್ಥೆಯ ಇಂಜಿನಿಯರಿಂಗ್ ಸಲಹೆಗಾರ ಷಿಬಿನ್, ಅಹಾಯಕ ಕಾರ್ಯಕಾರಿ ಇಂಜಿನಿಯರ್ ಗಳಾದ ಮಿತ್ರ, ಉಮೇಶ್, ಸಹಾಯಕ ಇಂಜಿನಿಯರ್ ವೈಶಾಖ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries