ಮುಳ್ಳೇರಿಯ: ರಸ್ತೆ ಬದಿಯ ಮರಗಳು, ಗೆಲ್ಲುಗಳು ಬಿದ್ದು ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೆರ್ಕಳ ಜಾಲ್ಸೂರು ಹೆದ್ದಾರಿಯ ಬದಿಗಳಲ್ಲಿ ಅಪಾಯ ಸೂಚಿಸುವ ರೀತಿ ಇರುವ ಮರಗಳನ್ನು ಕಡಿದು ತೆರವುಗೊಳಿಸುವ ಕಾಯಕ ಆರಮಭವಾಗಿದೆ.
ಜಿಲ್ಲಾ ದುರಂತ ನಿವಾರಭಾ ಪ್ರಾಧಿಕಾರ ನಡೆಸಿದ ತುರ್ತು ಸಭೆಯಲ್ಲಿ ತಳೆದ ತೀರ್ಮಾನದ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಕಮರ್ಂತೋಡಿಯಿಂದ ಆದೂರು ವರೆಗಿನ ಹೆದ್ದಾರಿಯಲ್ಲಿ ಸೋಮವಾರ ಆರಂಭಗೊಂಡಿರುವ ಕಾಯಕಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲಿ ತಂಡ ಹೆಗಲು ನೀಡಿದೆ. ಅರಣ್ಯ, ವಿದ್ಯುತ್ ಇಲಾಖೆಗಳು ಸಹಕಾರ ನಿಡಿದ್ದುವು. ಸುಮಾರು 50 ಅಕೇಷ್ಯಾ, 200 ಇತರ ಮರಗಳು, ಕೆಲವು ಮರಗಳಗೆಲ್ಲುಗಳು ಇತ್ಯಾದು ಕಡಿದು ತೆರವುಗೊಳಿಸಲಾಗಿದೆ. ಕಡಿದ ಮರಗಳ ದ್ವಿಗುಣಿ ಸಂಖ್ಯೆಯಲ್ಲಿ ಮರಗಳಾಗಿ ಬೆಳೆಯಬಲ್ಲ ಸಸಿಗಳನ್ನು ನೆಡಲಾಗಿದೆ. ನಾಳೆ(ಅ.30) ಮರ ಕಡಿದು ತೆರವುಗೊಳಿಸುವ ಕಾಯಕ ಪೂರ್ಣಗೊಳ್ಳಲಿದೆ.


