ಕಾಸರಗೋಡು: ಜಿಲ್ಲೆಯ ಉದ್ಯೋಗಾರ್ಥಿಗಳಿಗೆ ಸ್ಪರ್ಧಾ ಪರೀಕ್ಷೆಗಳಿಗೆ ಸಂಬಂಧಿಸಿ ಉಚಿತ ತರಬೇತಿ ನೀಡಲು ಜಿಲ್ಲಾಡಳಿತೆ ಯೋಜನೆ ಸಿದ್ಧಪಡಿಸಿದೆ.
`ಉನ್ನತಿ' ಎಂಬ ಹೆಸರಿನಲ್ಲಿ ಲೋಕಸೇವಾ ಆಯೋಗ, ಯು.ಪಿ.ಎಸ್.ಸಿ. ಸಹಿತ ಸ್ಪರ್ಧಾ ಪರೀಕ್ಷೆಗಳಿಗೆ ಸಂಬಂಧಿಸಿ ಉಚಿತ ರೂಪದಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೆರಿಯರ್ ಗೈಡೆನ್ಸ್ ಸೆಲ್‍ನ ಉಸ್ತುವಾರಿಯಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಾರಿಗೊಳಿಸುವ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಸೂಕ್ತ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲದೇ ಇರುವುದು ಸಮಸ್ಯೆಯಾಗುತ್ತಿದೆ. ಜಿಲ್ಲೆಯ ಉದ್ಯೋಗ ವಲಯಗಳಿಗೆ ಜಿಲ್ಲೆಯ ಮೂಲನಿವಾಸಿಗಳೇ ಆಗಿರುವ ಉದ್ಯೋಗಾರ್ಥಿಗಳನ್ನು ತಲಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ರಜಾ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಈ ತರಬೇತಿ ನಡೆಯಲಿವೆ. ಪರಿಣತರು ತರಗತಿಗಳನ್ನು ನಡೆಸಿಕೊಡುವರು. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ತರಬೇತಿ ಆರಂಭಿಸುವ ನಿರೀಕ್ಷೆಯಿದ್ದು, ಪ್ಲಸ್-ಟು/ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ನೂರು ಮಂದಿಗೆ ತರಬೇತಿ ನೀಡಲಾಗುವುದು.
ಆಸಕ್ತರು ಅ.31ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.. https://forms.gle/

