HEALTH TIPS

ಶೇಷವನ ಕಾರ್ತಿಕಮಾಸ ದೀಪೆÇೀತ್ಸವಕ್ಕೆ ಚಾಲನೆ


    ಕಾಸರಗೋಡು:  ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ  ದೇವಸ್ಥಾನದಲ್ಲಿ ನ.26 ರ ತನಕ ಜರಗುವ ಕಾರ್ತಿಕಮಾಸ ದೀಪೆÇೀತ್ಸವದ ಪ್ರಯುಕ್ತ ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಸಹಿತ ಶೋಭಾಯಾತ್ರೆಯ ಮೂಲಕ ಚಾಲನೆ ನೀಡಲಾಯಿತು.
     ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರದ ಶ್ರೀ ಪಾರ್ವತಿ ದೇವಿಗೆ ಸ್ವರ್ಣ ಕರಿಮಣಿಸರ, ಶ್ರೀ ಗಣಪತಿ ದೇವರಿಗೆ ರಜತ ಕಿರೀಟ, ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ರಜತ ಗಿಂಡಿ ಹಾಗು ಉದ್ಧರಣೆ ಮತ್ತು ಅಡುಗೆಗೆ ಅಗತ್ಯವಿರುವ ಪಾತ್ರೆಗಳನ್ನು ತರಲಾಯಿತು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅನುವಂಶಿಕ        ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ, ಟ್ರಸ್ಟ್ ಸದಸ್ಯರು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನೇತೃತ್ವ ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries