ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತಗಣನೆ ಪ್ರಕ್ರಿಯೆಯ ಫಲಿತಾಂಶವನು ಯಥಾವತ್ತಾಗಿ ಒದಗಿಸುವಲ್ಲಿ ಮಾಧ್ಯಮ ಕೇಂದ್ರ ಯಶಸ್ವಿಯಾಗಿದೆ.
ಜಿಲ್ಲಾ ವಾರ್ತಾ ಇಲಾಖೆ ಕಚೇರಿ ವತಿಯಿಂದ ಮತಗಣನೆ ಕೇಂದ್ರವಾಗಿದ್ದ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಮಾಧ್ಯಮ ಕೇಂದ್ರ ಸಿದ್ಧಪಡಿಸಲಾಗಿತ್ತು. ಎರಡು ದೊಡ್ಡ ಸ್ಕ್ರೀನ್ ಗಳಲ್ಲಿ ಫಲಿತಾಂಶ ಡಿಸ್ ಪ್ಲೇ ನಡೆಸಲಾಗಿತ್ತು. ಒಂದು ದೊಡ್ಡ ಟಿವಿ ಮೂಲಕ ರಾಜ್ಯದಲ್ಲಿ ನಡೆದ ಫಲಿತಾಂಶಗಳ ಪ್ರಸಾರ ವೀಕ್ಷಿಸುವ ವ್ಯವಸ್ಥೆ ಒದಗಿಸಲಾಗಿತ್ತು. ಸುಮಾರು 50 ಮಂದಿ ಕುಳಿತು ಫಲಿತಾಂಶ ವೀಕ್ಷಿಸುವ ವ್ಯವಸ್ಥೆ ನಡೆಸಲಾಗಿತ್ತು. ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ. ನೇತೃತ್ವ ವಹಿಸಿದ್ದರು. ಸಿಬ್ಬಂದಿ ಕೃಷ್ಣನ್ ಉಸ್ತುವಾರಿ ವಹಿಸಿದ್ದರು. ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು ಮತ್ತು ಛಾಯಾಗ್ರಾಹಕ ಅಖಿಲೇಶ್ ನಗುಮುಗಂ, ಮಲೆಯಾಳಂ ಮಾಹಿತಿ ಸಹಾಯಕ ಕರೀಂ ಎರಿಯಾಲ್ ಮತ್ತು ವಾಹನಚಾಲಕ ಸುನೋಜ್ ಸಹಕಾರ ಒದಗಿಸಿದ್ದರು. ಬಿ.ಎಸ್.ಎನ್.ಎಲ್ ವೈಫೈ ಸೌಲಭ್ಯ ಒದಗಿಸುವ ಮೂಲಕ ಮಾಧ್ಯಮ ಕೇಂದ್ರಕ್ಕೆ ತಾಂತ್ರಿಕ ಸಹಾಯ ಒದಗಿಸಿತ್ತು. ಜಿಲ್ಲಾ ಇನ್ ಫಾರ್ಮೆಟಿಕ್ ಅಧಿಕಾರಿ ಕೆ.ರಾಜನ್, ಬಿ.ಎಸ್.ಎನ್.ಎಲ್. ಸಹಾಯಕ ಪ್ರಧಾನ ಪ್ರಬಂಧಕ ಲಿಯೋ ಬಿ.ಪೆರೇರ ತಾಂತ್ರಿಕ ಚಟುವಟಿಕೆಗಳಿಗೆ ಸಹಾಯ ಒದಗಿಸಿದ್ದರು. ಟ್ರೆಂಡ್ ಸಾಫ್ಟ್‍ವೇರ್ ಬಳಕೆಯೊಂದಿಗೆ ಯಥಾವತ್ತಾಗಿ ಅಧಿಕೃತ ಫಲಿತಾಂಶ ತಿಳಿಯಲು ಸಾಧ್ಯವಾಗಿತ್ತು.