ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಸ್ಕೂಲಿನ ವಿದ್ಯಾರ್ಥಿಗಳು. ಕ್ಲೇ ಮಾಡೆಲಿಂಗ್ ನಲ್ಲಿ ಹರ್ಷಿತ ಪಿ ದ್ವಿತೀಯ ಸ್ಥಾನ, ಎಂಬ್ರೋಡರಿಯಲ್ಲಿ ಆದಿಲ ಪ್ರಥಮ, ಕುಮಾರಿ ಮೆಲ್ವಿಟ ಅವರು ಚೋಕ್ ಮೇಕಿಂಗ್ ನಲ್ಲಿ ಪ್ರಥಮ, ಸ್ಟಫ್‍ಡ್ ಟೋಯಿಸ್ ನಲ್ಲಿ ಫಾತಿಮ ಅಶ್ರಫ್ ಪ್ರಥಮ, ಸ್ಥಾನ ಹಾಗೂ ಪ್ರೊಡಕ್ಟ್ ಯೂಸಿಂಗ್ ಪಾಮ್ ಲೀಸ್ ನಲ್ಲಿ ಕಾರ್ತಿಕ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ವೃತ್ತಿ ಪರಿಚಯ ಮೇಳದ ಪ್ರದರ್ಶನ ವಿಭಾಗದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳು ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ವಿಜೇತರನ್ನು ಅಭಿನಂದಿಸಿದ್ದಾರೆ.