HEALTH TIPS

ಕರೊನಾ ಭೀತಿ: ಇ-ಪೋಸ್ ಯಂತ್ರದ ಬೆರಳಚ್ಚು ಕೈಬಿಟ್ಟ ಇಲಾಖೆ


        ಕಾಸರಗೋಡು: ಕರೊನಾ ವೈರಸ್ ಭೀತಿಯಿಂದ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಂಚಿಂಗ್ ವ್ಯವಸ್ಥೆಯನ್ನು ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದ್ದು, ಇದೀಗ ರೇಶನ್ ಅಂಗಡಿಗಳ ಇ-ಪೋಸ್ ಯಂತ್ರಗಳಿಗೂ ಕರೊನಾ ಬಿಸಿ ತಟ್ಟಿದೆ. ರೇಶನ್ ಅಂಗಡಿಗಳಲ್ಲಿನ ಇ-ಪೋಸ್ ಸಲಕರಣೆಗೆ ರೇಶನ್ ಕಾರ್ಡಿನಲ್ಲಿ ಹೆಸರಿರುವವರ ಬೆರಳಚ್ಚು ಕಡ್ಡಾಯವಾಗಿದ್ದು, ವೈರಸ್ ಬಾಧೆ ವ್ಯಾಪಿಸುವ ಭೀತಿಯಿಂದ ಬೆರಳಚ್ಚು ಕೈಬಿಟ್ಟು ಆಯಾ  ಕಾರ್ಡುದಾರರ ಮೊಬೈಲ್ ಫೋನ್ ನಂಬರ್‍ಗೆ ಓ.ಟಿ.ಪಿ ನಂಬರ್ ಲಭಿಸುವಂತೆ ಮಾಡಿ, ರೇಶನ್ ಪೂರೈಸುವ ವ್ಯವಸ್ಥೆ ಮಾಡಲಾಗಿದೆ.
          ಇದಕ್ಕಾಗಿ ರೇಶನ್ ಅಂಗಡಿಗೆ ತೆರಳುವವರು ಇನ್ನು ಮುಂದೆ ಕಡ್ಡಾಯವಾಗಿ ಮೊಬೈಲ್‍ನೊಂದಿಗೆ  ತೆರಳಬೇಕಾಗಿದೆ. ರೇಶನ್ ಕಾರ್ಡು ನಂಬರ್ ಇ-ಪೋಸ್ ಯಂತ್ರದಲ್ಲಿ ದಾಖಲಿಸುವಾಗ ರೇಶನ್ ಸಾಮಗ್ರಿಗೆ ಅರ್ಹರಾದವರ ಹೆಸರು ಕಂಡುಬರುತ್ತದೆ. ಈ ಸಂದರ್ಭ ಈ ಹಿಂದೆ ನೋಂದಾಯಿಸಿಕೊಂಡಿರುವ ಮೊಬೈಲ್ ನಂಬರ್‍ಗೆ ಓ.ಟಿ.ಪಿ ನಂಬರ್ ಲಭಿಸುತ್ತದೆ. ಈ ಮೂಲಕ ಸಾಮಗ್ರಿ ವಿತರಣೆ ನಡೆಯಲಿದೆ. ಗುರುವಾರದಿಂದ ಈ ವ್ಯವಸ್ಥೆ ಕೇರಳ ರಾಜ್ಯಾದ್ಯಂತ ಆರಂಭಗೊಂಡಿದೆ. ಆದರೆ ಹೊಸ ವ್ಯವಸ್ಥೆ ಬಗ್ಗೆ ಮಾಹಿತಿ ಲಭಿಸದೆ, ಮೊಬೈಲ್ ಕೊಂಡೊಯ್ಯದವರು ಬರಿಗೈಯಲ್ಲಿ ವಾಪಸಾಗಬೇಕಾಗಿ ಬಂದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries