ನವದೆಹಲಿ: 'ಸಾಲು ಸಾಲು ಹಬ್ಬಗಳಿರುವ ಕಾರಣ, ಸದಸ್ಯರ ಮನವಿಯ ಮೇರೆಗೆ ಮಾರ್ಚ್ 19 ಹಾಗೂ 20ರಂದು ಅಧಿವೇಶನ ನಡೆಯುವುದಿಲ್ಲ. ಇದರ ಬದಲಾಗಿ, ಮಾರ್ಚ್ 28 ಹಾಗೂ 29ರಂದು ರಾಜ್ಯಸಭಾ ಕಲಾಪ ನಡೆಯಲಿದೆ' ಎಂದು ಸಭಾಪತಿ ಸಿ.ಪಿ. ರಾಧಾಕೃಷ್ಣನ್ ತಿಳಿಸಿದ್ದಾರೆ.
'ಮಾರ್ಚ್ 19ರಿಂದ 20ರವರೆಗೆ ರಂಜಾನ್, ಯುಗಾದಿ ಹಬ್ಬ ಬರಲಿದೆ.
ಈ ಸಂದರ್ಭದಲ್ಲಿ ಸದನ ನಡೆಸುವುದು ಸೂಕ್ತವಲ್ಲ ಎಂದು ಇದೇ 11ರಂದು ನಡೆದ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರು ತಿಳಿಸಿದ್ದರು. ಹೀಗಾಗಿ, 19 ಹಾಗೂ 20ರಂದು ನಿಗದಿಯಾಗಿದ್ದ ಸಮಿತಿ ಸಭೆಗಳನ್ನು ರದ್ದುಗೊಳಿಸಲಾಗಿದೆ. ಇದರ ಬದಲಾಗಿ, ಮಾರ್ಚ್ 28, 29ರಂದು ಸಭೆ ನಿಗದಿಪಡಿಸಲಾಗಿದ್ದು, ಎಲ್ಲ ಸದಸ್ಯರು ಇದನ್ನು ಗಮನಿಸಬೇಕು' ಎಂದು ತಿಳಿಸಿದ್ದಾರೆ.

