LPG ಸಾಗಾಟದ ಭಾರತೀಯ ಧ್ವಜಗಳನ್ನು ಹೊತ್ತ ಶಿವಾಲಿಕ್ ಮತ್ತು ನಂದಾದೇವಿ ಟ್ಯಾಂಕರ್ಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಇರಾನ್ ಅಧಿಕಾರಿಗಳು ಅನುಮತಿ ನೀಡಿದ್ದರು.
ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಅನುಕ್ರಮವಾಗಿ ಮಾ.16 ಮತ್ತು ಮಾ.17ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ನೌಕಾ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು ಶನಿವಾರ ತಿಳಿಸಿದ್ದರು.
ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಹಾರ್ಮುಝ್ ಜಲಸಂಧಿಯ ಪಶ್ಚಿಮದ ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ ಧ್ವಜವನ್ನು ಹೊತ್ತ 24 ಹಡಗುಗಳಿದ್ದವು. ಈ ಪೈಕಿ ಒಟ್ಟು 92,700 ಮೆ.ಟನ್ LPG ಹೊತ್ತಿರುವ ಶಿವಾಲಿಕ್ ಮತ್ತು ನಂದಾದೇವಿ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಭಾರತದತ್ತ ಪ್ರಯಾಣಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದರು.

