ಕೋಲ್ಕತ್ತ: ಪಶ್ಚಿಮ ಬಂಗಾಳದ ವಿದಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ 200ರ ಸ್ಥಾನಗಳನ್ನು ಗೆಲ್ಲುವತ್ತ ದಾಪುಗಾಲಿಟ್ಟಿದೆ. ಟಿಎಂಸಿ ಭಾರಿ ಮುಳಭಂಗ ಅನುಭವಿಸಿದೆ. ಟಿಎಂಸಿಯಿಂದ ಸಿಡಿದು ಹೊರಬಂದಿದ್ದ ಸುವೇಂದು ಅಧಿಕಾರಿ, ಬಿಜೆಪಿಯನ್ನು ಚುನಾವಣೆಯಲ್ಲಿ ಮುನ್ನಡೆಸಿದ್ದರು.
ಗುರು ಮಮತಾ ಬ್ಯಾನರ್ಜಿಗೆ ಕೊನೆಗೂ ಸೋಲಿನ ರುಚಿ ತೋರಿಸಿದ್ದಾರೆ.
ಈ ಅಭೂತಪೂರ್ವ ಗೆಲುವನ್ನು ಬಿಜೆಪಿ ಸಂಭ್ರಮಿಸುತ್ತಿದೆ. ನವದೆಹಲಿಯ ಪಕ್ಷ ಕೇಂದ್ರ ಕಚೇರಿ ಬಳಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ರೋಡ್ ಶೋ ನಡೆಸಿ, ಜಯಘೋಷ ಕೂಗುತ್ತಾ ಸಂಭ್ರಮಿಸಿದ್ದಾರೆ. ಕೋಲ್ಕತ್ತ ಬಿಜೆಪಿ ಕಚೇರಿ ಬಳಿಯೂ ಸಂಭ್ರಮ ಮೇರೆ ಮೀರಿದೆ.
ಇತ್ತ, ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗುತ್ತಿದ್ದಂತೆ ಕೋಲ್ಕತ್ತದಲ್ಲಿ ಕಾರ್ಯಕರ್ತರು ಫಿಶ್ ಕರಿ ರೈಸ್ ತಿಂದು ಸಂಭ್ರಮಿಸುತ್ತಿದ್ದಾರೆ. ಮೀನಿನ ಊಟದ ಸಂಭ್ರಮದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ದೆಹಲಿಯ ಸಚಿವಾಲಯಗಳಲ್ಲಿ ಝಲ್ಮುರಿ ಮತ್ತು ರಸಗುಲ್ಲಾ ಹಂಚಿ ಸಂಭ್ರಮಿಸಲಾಗುತ್ತಿದೆ.

