HEALTH TIPS

ದೆಹಲಿಯ ಹೋಟೆಲ್‌ ಅಗ್ನಿ ದುರಂತ: ಮೃತರಲ್ಲಿ 13 ವಿದೇಶಿಯರು; ರಣಧೀರ್‌ ಜೈಸ್ವಾಲ್‌

 ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ಬುಧವಾರ ಸಂಭವಿಸಿದ್ದ ಹೋಟೆಲ್‌ ಅಗ್ನಿ ದುರಂತದಲ್ಲಿ ಮೃತಪಟ್ಟವರ ಪೈಕಿ 13 ಮಂದಿ ವಿದೇಶಿಯರು ಸೇರಿದ್ದಾರೆ. ಆಯಾ ದೇಶಗಳ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ನೆರವು ನೀಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


'13 ಮಂದಿ ಪೈಕಿ ನೈಜೀರಿಯಾದ ನಾಲ್ವರು, ಕಿರ್ಗಿಸ್ತಾನದ ಮೂವರು ಮತ್ತು ಮೊಜಾಂಬಿಕ್‌, ಉಜ್ಬೇಕಿಸ್ತಾನ, ಬಾಂಗ್ಲಾದೇಶ, ಕಾಂಗೋ, ಲೈಬೀರಿಯಾ ಮತ್ತು ಇರಾಕ್‌ನ ತಲಾ ಒಬ್ಬರು ಸೇರಿದ್ದಾರೆ. ಘಟನೆಯಲ್ಲಿ 20ರಿಂದ 22 ವಿದೇಶಿ ಪ್ರಜೆಗಳು ಗಾಯಗೊಂಡಿದ್ದಾರೆ' ಎಂದು ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

'ದುರಂತದಲ್ಲಿ ಮೃತಪಟ್ಟವರ ಕುಟಂಬಸ್ಥರು ಬಯಸುವ ರೀತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿರುವ ಎಲ್ಲ ದಾಖಲೆಗಳಿಗಾಗಿ ಸ್ಥಳೀಯ ಅಧಿಕಾರಿಗಳು ಮತ್ತು ವೈದ್ಯಕೀಯ ನೆರವಿಗಾಗಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ' ಎಂದು ಹೇಳಿದ್ದಾರೆ.

ಜೂನ್‌ 3ರಂದು ಬೆಳಿಗ್ಗೆ 8.30ಕ್ಕೆ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.



 ರಣಧೀರ್‌ ಜೈಸ್ವಾಲ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries