ಪೆರ್ಲ : ಎಣ್ಮಕಜೆ ಪಂಚಾಯತಿಗೊಳಪಟ್ಟ ಬಹು ನಿರೀಕ್ಷಿತ ಯೋಜನೆಯಾದ ಬಾಕಿಲಪದವು ಸೇತುವೆ ನಿರ್ಮಾಣ ಕಾಮಗಾರಿಗೆ 9 ಕೋಟಿ 69 ಲಕ್ಷರೂ ಯೋಜನೆಯ ಸಾಂಕೇತಿಕ. ಅನುಮತಿ ದೊರೆತಿರುವುದಾಗಿ ಶಾಸಕ ಎಕೆಎಂ ಆಶ್ರಫ್ ತಿಳಿಸಿದ್ದಾರೆ.
ಈ ಹಿಂದೆ 2023-24ರಲ್ಲಿ ಆಗಿನ ಪಂಚಾಯತ್ ಅಧ್ಯಕ್ಷರಾಗಿದ್ದ ಸೋಮಶೇಖರ್ ಜೆ.ಎಸ್.ಆಡಳಿತದ ಕಾಲಾವಧಿಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಶಾಸಕರಲ್ಲಿ ಬೇಡಿಕೆ ಇರಿಸಿದ ಫಲವಾಗಿ ಅಂದು ಕಾಮಗಾರಿ ನಡೆಸಲು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ನೀಡಲಾಗಿತ್ತು. ಬಳಿಕ ಸ್ಥಳದಲ್ಲಿ ಸೇತುವೆ ನಿರ್ಮಾಣದ ಪೂರ್ವಪರ ಕಾಮಗಾರಿಗಳು ನಡೆತ್ತಿದ್ದಂತೆ ಸ್ಥಳೀಯ ವ್ಯಕ್ತಿಗಳು ಸ್ಥಳದ ತಕರಾರು ಕಾರಣವೊಡ್ಡಿ ಕೆಲಸ ಕಾರ್ಯಕ್ಕೆ ತಡೆಯೊಡ್ಡಲಾಗಿತ್ತು. ಇದಾದ ಬಳಿಕ ಸ್ವತಃ ಪಂಚಾಯತ್ ಅಧ್ಯಕ್ಷರೇ ಮುತುವರ್ಜಿ ವಹಿಸಿ ಫಲಾನುಭವಿಗಳ ಸೇರಿಸಿ ಕ್ರಿಯಾ ಸಮಿತಿಯೊಂದನ್ನು ರಚಿಸಿ ಯೋಜನೆ ನಷ್ಟಗೊಳ್ಳಬಾರದೆಂಬ ಉದ್ದೇಶದಿಂದ ಸ್ಟೇ ತಂದ ಸ್ಥಳಗಳನ್ನು ಬಿಟ್ಟು ಸೇತುವೆ ನಿರ್ಮಾಣ ಕಾಮಗಾರಿಗೆ ಅನುಕೂಲಕರ ಸ್ಥಳಗಳನ್ನು ಪುನರ್ ಪರಿಶೀಲಿಸುವಂತೆ ಯೋಜನೆ ತಯಾರಿಸಿ ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು. ಇದಾದ ಬಳಿಕ ಶಾಸಕರ ಸಹಿತ ಸಂಬಂಧಪಟ್ಟವರ ಬಳಿ ನಿರಂತರ ಒತ್ತಡ ಹೇರಲಾಗಿದ್ದು ಇದೀಗ ಸೇತುವೆ ನಿರ್ಮಾಣಕ್ಕೆ ಸಾಂಕೇತಿಕ ಅನುಮತಿ ಲಭಿಸಿದೆ. ಈ ಯೋಜನೆ ಪೂರ್ಣಗೊಂಡರೆ ನಲ್ಕ ವಂರ್ಬೋಡಿ ಬಾಕಿಲಪದವು ಮೂಲಕ ಕಲ್ಯಾಟೆ, ಸಾಯ ಚವರ್ಕಾಡ್ ಅಡ್ಯನಡ್ಕ ಮೊದಲಾದೆಡೆಯ ಜನತೆಗೆ ವರದಾನವಾಗಲಿದೆ.ಕಾಮಗಾರಿಯ ಪುನರ್ ಪ್ರಕ್ರಿಯೆಗೆ ನಿರಂತರ ಶ್ರಮಿಸಿದ ಮಂಜೇಶ್ವರದ ಶಾಸಕ ಎಕೆಎಂ ಆಶ್ರಫ್ ಹಾಗೂ ಮಾಜಿ ಪಂ.ಅಧ್ಯಕ್ಷರು ಪ್ರಸ್ತುತ ಜಿಲ್ಲಾ ಪಂ.ಸದಸ್ಯರು ಆಗಿರುವ ಸೋಮಶೇಖರ್ ಜೆ.ಎಸ್.ಅವರನ್ನು ಸ್ಥಳೀಯ ನಾಗರಿಕರು ಅಭಿನಂದಿಸಿದ್ದಾರೆ.
COTS:

.jpg)
.jpg)
