ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಕುಮಾರಸ್ವಾಮಿ ವಿದ್ಯಾಮಂದಿರದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಸೋಮವಾರ ಜರಗಿತು. ಸಮಿತಿಯ ಅಧ್ಯಕ್ಷ ರಮೇಶ್ ಕಳೇರಿ, ಕಿರಣ್ ನೀರ್ಚಾಲು, ಸಮಿತಿ ಸದಸ್ಯರು ಮತ್ತು ಮಾತೆಯರು ಭಾಗವಹಿಸಿದ್ದರು. ಹೊಸದಾಗಿ ಸೇರ್ಪಡೆಗೊಂಡ ಪುಟಾಣಿಗಳನ್ನು ಆರತಿ ಮಾಡಿ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಒಟ್ಟು 11 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡಿದ್ದರು.

.jpg)
