ಎಎಫ್‌ಪಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಅಂಕಿಅಂಶಗಳಿಗೆ ಪ್ರತಿಕ್ರಿಯಿಸಿದ ಅವರು, 'ಭಾರತದ ಜನನ ಪ್ರಮಾಣ ಈಗ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ.
ಹೆಚ್ಚು ವಿದ್ಯಾವಂತರಲ್ಲಿ ಈ ಪ್ರಮಾಣ ಹಲವು ವರ್ಷಗಳ ಹಿಂದೆಯೇ ಬದಲಿ ಮಟ್ಟಕ್ಕಿಂತ ಕೆಳಗಿಳಿದಿತ್ತು' ಎಂದು ಹೇಳಿದ್ದಾರೆ.
2024ರ ಮಾದರಿ ನೋಂದಣಿ ವ್ಯವಸ್ಥೆ (SRS) ವರದಿ ಪ್ರಕಾರ, ದೇಶದ ಒಟ್ಟು ಫಲವತ್ತತೆ ದರವು ಪ್ರತಿ ಮಹಿಳೆಗೆ 2.1 ಮಕ್ಕಳಿಂದ 1.9 ಮಕ್ಕಳಿಗೆ ಇಳಿಕೆಯಾಗಿದೆ.
ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಜಾರ್ಖಂಡ್ ರಾಜ್ಯಗಳು ಮಾತ್ರ 2.1ಕ್ಕಿಂತ ಹೆಚ್ಚಿನ ಫಲವತ್ತತೆ ದರವನ್ನು ದಾಖಲಿಸಿವೆ. ಹೊಸದಿಲ್ಲಿಯಲ್ಲಿ ಪ್ರತಿ ಮಹಿಳೆಗೆ 1.2 ಮಕ್ಕಳ ಫಲವತ್ತತೆ ದರ ದಾಖಲಾಗಿದ್ದು, ಇದು ದೇಶದಲ್ಲೇ ಅತ್ಯಂತ ಕಡಿಮೆ ಮಟ್ಟವಾಗಿದೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಪ್ರಕಟಿಸಿರುವ 2025ರ ವಿಶ್ವ ಜನಸಂಖ್ಯಾ ವರದಿಯಲ್ಲಿಯೂ ಭಾರತದ ಫಲವತ್ತತೆ ದರವು ಪ್ರತಿ ಮಹಿಳೆಗೆ 1.9 ಮಕ್ಕಳಷ್ಟಿದೆ ಎಂದು ಉಲ್ಲೇಖಿಸಲಾಗಿದೆ.
1.46 ಶತಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿಯೇ ಉಳಿದಿದೆ. ಆದರೆ ಇತ್ತೀಚಿನ ಅಂಕಿಅಂಶಗಳು ದೇಶದಲ್ಲಿ ಜನನ ಪ್ರಮಾಣ ಮತ್ತು ಜನಸಂಖ್ಯೆ ಬೆಳವಣಿಗೆಯ ವೇಗ ಕುಸಿಯುತ್ತಿರುವುದನ್ನು ಸೂಚಿಸಿವೆ.

