ಪೆರ್ಲ: ಯೇಸುವಿನ ಪವಿತ್ರ ಹೃದಯದ ದೇವಾಲಯ ಉಕ್ಕಿನಡ್ಕ ಇಗರ್ಜಿಯ ನೂತನ ಧರ್ಮ ಗುರುಗಳಾಗಿ ರೆ. ಫಾ. ಗಿಲ್ಬರ್ಟ್ ಮಸ್ಕರೆನ್ಹಸ್ ಅಧಿಕಾರ ಸ್ವೀಕಾರ ಮಾಡಿದರು. ರೆ. ಫಾ. ಸುನಿಲ್ ಬ್ಯಾಪ್ಟಿಸ್ಟ್ ಮಿರಾಂದ ನೂತನ ಧರ್ಮಗುರುಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಬಿಷಪರ ಪ್ರತಿನಿಧಿಯಾಗಿ ಮಣಿಯಂಪಾರೆ ಇಗರ್ಜಿಯ ಧರ್ಮಗುರುಗಳಾದ ರೆ. ಫಾ. ನೆಲ್ಸನ್. ಡಿ. ಅಲ್ಮೆಡಾರವರು ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನಿರ್ವಹಿಸಿದರು. ಬಂಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ರೆ. ಫಾ. ವಿಕ್ಟರ್ ಡಿ'ಸೋಜ ಹಾಗೂ ಪಾಲೊಟಾಯ್ನ್ ಸಂಸ್ಥೆಯ ಲೋಕಲ್ ರೆಕ್ಟರ್ ರೆ. ಫಾ. ಮಾರ್ಕ್ ಡಿ'ಸೋಜ, ರೆ. ಫಾ. ಪೀಟರ್ ಡಿ'ಸೋಜ ರೆ. ಫಾ. ಫ್ರಾನ್ಸಿಸ್ ಕ್ರಾಸ್ತಾ, ರೆ.ಫಾ.ವಿಲ್ಸನ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು. ಪಾಲನಾ ಸಮಿತಿಯ ಉಪಾಧ್ಯಕ್ಷೆ ನೀತಾ ಕ್ರಾಸ್ತಾ ಸ್ವಾಗತಿಸಿ, ಕಾರ್ಯದರ್ಶಿ ವಿನ್ಸೆಂಟ್ ಡಿ'ಸೋಜ ವಂದಿಸಿದರು. ವಿನ್ಸೆಂಟ್ ಡಿಸೋಜ ಉಕ್ಲಾಡಿ ಕಾರ್ಯಕ್ರಮ ನಿರ್ವಹಿಸಿದರು.

.jpg)
.jpg)
