ಬದಿಯಡ್ಕ: ಭತ್ತದ ಕೃಷಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ಯೋಜನೆ ಕೃಷಿ ಭವನದ ಮೂಲಕ ಭತ್ತದ ಬೀಜ ವಿತರಣೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಸದಸ್ಯರುಗಳಾದ ಶಾಹಿನಾ, ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಸರಳಿ, ಕೃಷಿ ಅಧಿಕಾರಿ ಬಿಂದು ಜೋರ್ಜ್, ಸಹಾಯಕ ಕೃಷಿ ಅಧಿಕಾರಿ ಮೋಹನನ್ ಮೊದಲಾದವರು ಪಾಲ್ಗೊಂಡಿದ್ದರು. ಫಲಾನುಭವಿಗಳಿಗೆ ಭತ್ತದ ಬೀಜವನ್ನು ವಿತರಿಸಲಾಯಿತು.

.jpg)
