ಕಾಸರಗೋಡು: ಪಿಲಿಕೋಡ್ ಕಣ್ಣಂಗೈ ನಿವಾಸಿ, ನಿವೃತ್ತ ಆರೋಗ್ಯ ಇಲಾಖೆ ನೌಕರ ಕೆ.ವಿ. ರವೀಂದ್ರನ್ (65)ಅವರ ಮೃತದೇಹ ಜನವಾಸವಿಲ್ಲದ ತರವಾಡು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇಣಿನಲ್ಲಿ ನೇತಾಡುತ್ತಿದ್ದ ಇವರನ್ನು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಇವರ ಪುತ್ರ ವಿಪಿನ್ ವರ್ಷಗಳ ಹಿಂದೆ ರೈಲಿನಿಂದ ಬಿದ್ದು ಮೃತಪಟ್ಟಿದ್ದರು.


