ಕಾಸರಗೋಡು: ವಿಶ್ವ ಪರಿಸರ ದಿನವನ್ನು ಬಾನಂ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಮರಕ್ಕೇ ಪತ್ರ ಬರೆಯುವ ಮೂಲಕ, ವೃಕ್ಷದ ಮಹತ್ವವನ್ನು ಜನತೆಗೆ ಪ್ರೀತಿಯ ವೃಕ್ಷವೇ.. ನೀನು ಚೆನ್ನಾಗಿದ್ದೀಯಾ? ನೀನು ನನ್ನ ಜೀವನದ ಮೂಕ ಸ್ನೇಹಿತನಾಗಿರುವೆ. ಸುಡುವ ಬಿಸಿಲಿಗೆ ನೆರಳಾಗಿ, ತಾಜಾ ಗಾಳಿ ಬೀಸುತ್ತಾ, ಸಿಹಿ ಹಣ್ಣುಗಳನ್ನು ನೀಡುತ್ತಾ ನೀನು ಯಾವಾಗಲೂ ನಮ್ಮೊಂದಿಗಿದ್ದೀಯ. ಅನೇಕ ಪ್ರಾಣಿ, ಪಕ್ಷಿಗಳ ಆಶ್ರಯದಾತ ನೀನು...ಮಕ್ಕಳು ಮರಕ್ಕೆ ಬರೆದ ಪತ್ರದ ಸಾಲುಗಳು ಇವು. ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ 'ಮರಕ್ಕೊಂದು ಪತ್ರ' ಕಾರ್ಯಕ್ರಮ ಗಮನಾರ್ಹವಾಗಿತ್ತು.
ಪರಿಸರ ಸಂರಕ್ಷಣೆಯ ಅಗತ್ಯವನ್ನು ಪತ್ರಗಳಲ್ಲಿನ ಒಕ್ಕಣೆ ಸ್ಪಷ್ಟವಾಗಿ ಸಾರುತ್ತಿತ್ತು. ಇದೇ ಸಂದರ್ಭ ಸಸಿ ನೆಡುವಿಕೆ, ಪರಿಸರ ರಸಪ್ರಶ್ನೆ ಮತ್ತು ಪೆÇೀಸ್ಟರ್ ಬರವಣಿಗೆಯೂ ನಡೆಯಿತು. ರಾಷ್ಟ್ರೀಯ ಹಸಿರು ಸೇನೆ ಮತ್ತು ಪರಿಸರ ಕ್ಲಬ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ ಸದಸ್ಯೆ ಬಿ. ಅಜಿತಾ ಸಮಾರಂಭ ಉದ್ಘಾಟಿಸಿದರು. ಶಾಲಾ ಪಿ.ಟಿ.ಎ. ಅಧ್ಯಕ್ಷ ಪಿ. ರಾಜೀವನ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಸಿ. ಅಧ್ಯಕ್ಷ ಪಿ. ದಿವಾಕರನ್, ಮುಖ್ಯ ಶಿಕ್ಷಕಿ ಸಿ. ಕೋಮಲವಲ್ಲಿ, ಹಿರಿಯ ಸಹಾಯಕ ಪಿ.ಕೆ. ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಅನಿತಾ ಮೇಲತ್ ಮತ್ತು ರಾಷ್ಟ್ರೀಯ ಹಸಿರು ಸೇನೆಯ ಸಂಯೋಜಕ ಅನೂಪ್ ಪೆರಿಯಾಲ್ ಉಪಸ್ಥಿತರಿದ್ದರು.



