HEALTH TIPS

ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಸರಗೋಡು: ನಗರದ ಕಸಬಾ ಕಡಪ್ಪುರದ ನೆಲ್ಲಿಕುಂಜೆ ಬೀಚ್‍ನಲ್ಲಿ ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ವತಿಯಿಂದ ಜಿಲ್ಲಾ ಮಟ್ಟದ ಪರಿಸರ ದಿನಾಚರಣೆಯನ್ನು "ಸೇವ್ ಅರ್ಥ್ ಸೇವ್ ಜನರೇಷನ್'ಘೋಷಣೆಯೊಂದಿಗೆ ನಡೆಸಲಾಯಿತು. 


ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ತನ್ವೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ಮತ್ತು ತಳಂಗರೆ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಸುಮಾರು 200 ಕೆಡೆಟ್‍ಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಐಪಿಎಸ್, ಸಹಾಯಕ ಪೆÇಲೀಸ್ ವರಿಷ್ಠಾಧಿಕಾರಿ ಅಚ್ಯುತ ಅಶೋಕ್ ಐಪಿಎಸ್,  ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ,  ಆರೋಗ್ಯ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರು,  ಕುರುಂಬ ಭಗವತಿ ದೇವಸ್ಥಾನದ ಜನಪ್ರತಿನಿಧಿಗಳು ಪದಾಧಿಕಾರಿಗಳು ಹಾಗೂ 75 ಮೇಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಅವರು ಕಡಪ್ಪುರದಲ್ಲಿ ಮಾವಿನ ಸಸಿ ನೆಡುವ ಮೂಲಕ ಕಾರ್ಯಖ್ರಮ ಉದ್ಘಾಟಿಸಿದರು.   ನೆಡಲಾದ ಸಸಿಗಳಿಗೆ  ರಕ್ಷಣೆಗಾಗಿ ಗ್ರಿಲ್ ಅಳವಡಿಸಲಯಿತು.  ಕಾಸರಗೋಡು ಜಿಲ್ಲೆಯಲ್ಲಿ  ಪೆÇಲೀಸ್ ಕೆಡೆಟ್‍ಗಳನ್ನು ಹೊಂದಿರುವ 45ಶಾಲೆಗಳಲ್ಲಿ  ಸೇವ್ ಅರ್ಥ್ ಸೇವ್ ಜನರೇಷನ್ ಹೆಸರಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries